

ಬಂಧಿತನನ್ನು 23 ವರ್ಷದ ಸೋನು ಕುಮಾರ್ ಷಾ ಎಂದು ಗುರುತಿಸಲಾಗಿದೆ. ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ವಿ. ಚಂದ್ರಕಾಂತ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ. ವೆಂಕಟೇಶ್ ಪ್ರಸನ್ನ, ಅಪರ ಪೊಲೀಸ್ ಅಧೀಕ್ಷಕರಾದ ಲಕ್ಷ್ಮೀನಾರಾಯಣ ಎ ವಿ ಹಾಗೂ ದೊಡ್ಡಬಳ್ಳಾಪುರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಪಾಂಡುರಂಗ ಡಿ.ವೈ.ಎಸ್.ಪಿ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಡಾ. ನವೀನ್ ಕುಮಾರ್ ಎಂ.ಬಿ. ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿ ಆರೋಪಿಯಾದ ಸೋನು ಕುಮಾರ್ ಷಾ ಅನ್ನು ಬಂಧಿಸಿ, ಬಂಧಿತರಿಂದ ₹4,00,000 ಮೌಲ್ಯದ 3 ಕೆಜಿ 400 ಗ್ರಾಂ ಗಾಂಜಾ ಸೊಪ್ಪನ್ನು ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಪೊಲೀಸ್ ಪಿ.ಎಸ್.ಐ ನಾರಾಯಣಸ್ವಾಮಿ, ಪಿ.ಎಸ್.ಐ ಚಂದ್ರಕಲಾ, ಪ್ರೋ ಪಿ.ಎಸ್.ಐ ನಾಗರಾಜು, ರಾಧಾಕೃಷ್ಣ ಎ.ಎಸ್.ಐ, ಹೆಚ್.ಸಿ. ರಂಗನಾಥ್, ಹೆಚ್.ಸಿ. ಸುನಿಲ್ ಭಾಸಗಿ, ಹೆಚ್.ಸಿ ಮಂಜುನಾಥ, ಹೆಚ್.ಸಿ ಚಂದ್ರಶೇಖರ್, ಹೆಚ್.ಸಿ ಮುತ್ತುರಾಜು, ಎ.ಹೆಚ್.ಸಿ ನಟರಾಜು,ಪಿಸಿ ನವೀನ್, ಪಿಸಿ ಪ್ರವೀಣ್,ಪಿಸಿ ಸಿದ್ರಾಮಯ್ಯ ಹಾಗೂ ತಾಂತ್ರಿಕ ಸಿಬ್ಬಂದಿಯವರ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಎಂ.ವಿ. ಚಂದ್ರಕಾಂತ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ. ವೆಂಕಟೇಶ್ ಪ್ರಸನ್ನ ಶ್ಲಾಘಿಸಿದ್ದಾರೆ.




