
ದೊಡ್ಡಬಳ್ಳಾಪುರ : ಕನ್ನಡ ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟೇಶ್ ರವರ 50ನೇ ಜನ್ಮದಿನಾಚರಣೆಯನ್ನು ಪಕ್ಷದ ಪ್ರಮುಖರು ಹಾಗೂ ಅಭಿಮಾನಿ ಬಳಗದ ವತಿಯಿಂದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡುವ ಮೂಲಕ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಸಂಜೀವ್ ನಾಯಕ್ ಭಾಗವಹಿಸಿ ಮಾತನಾಡಿದರು ನಾವೆಲ್ಲರೂ ಡಾ. ವೆಂಕಟರೆಡ್ಡಿಯವರ ಅನುಯಾಯಿಗಳು ಅವರಂತೆ ಸರಳ ಜೀವನ ಅಳವಡಿಸಿಕೊಂಡಿದ್ದೇವೆ ಇಂದು ನಮ್ಮ ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷರಾದ ವೆಂಕಟೇಶ್ ರವರ 50ವರ್ಷದ ಹುಟ್ಟುಹಬ್ಬದ ಅಂಗವಾಗಿ ವಿವಿಧ ಸಮಾಜಮುಖಿ ಕಾರ್ಯಕ್ರಮಗಳ ಆಯೋಜನೆ ಮೂಲಕ ಆಚರಿಸುತ್ತಿದ್ದು ಈ ಮೂಲಕ ಸಮಾಜಕ್ಕೆ ಸೇವಾ ಸಂದೇಶ ನೀಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಪಕ್ಷದಲ್ಲಿ ನಿರಂತರ 25ವರ್ಷಗಳ ನಿಸ್ವಾರ್ಥ ಸೇವೆ ಸಲ್ಲಿಸಿಕೊಂಡು ಬಂದಿರುವ ವೆಂಕಟೇಶ್ ತಮ್ಮದೇ ಅಭಿಮಾನಿ ಬಳಗ ಹೊಂದಿದ್ದು ಇಂದಿನ ಕಾರ್ಯಕ್ರಮ ಅಭಿಮಾನಿಗಳಿಂದ ನೆರವೆರುತ್ತಿರುವುದು ಮತ್ತಷ್ಟು ಸಂತೋಷ ತಂದಿದೆ. ನಮ್ಮ ಕನ್ನಡ ಪಕ್ಷದ ಸಿದ್ಧಾಂತ ಮತ್ತು ನಿಲುವು ಇಂದಿನ ಝೆನ್ ಜೀ (ಯುವ ಪೀಳಿಗೆಗೆ ) ತಲುಪಬೇಕಿದೆ ನಮ್ಮ ನೆಲ, ಜಲ, ಭಾಷೆ ಬಗೆಗಿನ ಹೋರಾಟ ಮುಂದೆ ಮತ್ತಷ್ಟು ನಡೆಯಲಿದೆ ಎಂದರು.
ಕನ್ನಡ ಪಕ್ಷದ ಮುಖಂಡ ಡಿ ಪಿ ಆಂಜನೇಯ ಮಾತನಾಡಿ ನಮ್ಮ ಕನ್ನಡ ಪಕ್ಷದಲ್ಲಿ ಅದ್ದೂರಿ ಆಚರಣೆಗಳಿಗೆ ಅವಕಾಶವಿಲ್ಲ ಹಾಗಾಗಿ ಸಮಾಜಕ್ಕೆ ಮಾದರಿಯಾಗುವಂತೆ ಬಡರೋಗಿಗಳಿಗೆ ಹಣ್ಣು ಹಂಪಲು, ಆಹಾರ ವಿತರಣೆ ಮಾಡುವ ಮೂಲಕ ನಮ್ಮ ಪಕ್ಷದ ನಾಯಕರ ಹುಟ್ಟುಹಬ್ಬದ ಆಚರಣೆ ಮಾಡುತ್ತಿರುವುದು ಅರ್ಥಪೂರ್ಣವಾಗಿದೆ ಎಂದರು.

ತಾಲ್ಲೂಕು ಅಧ್ಯಕ್ಷ ವೆಂಕಟೇಶ್ ಮಾತನಾಡಿ ನಾನು ಈವರೆಗೂ ನನ್ನ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿಲ್ಲ, ಅಭಿಮಾನಿಗಳ, ಹಿತೈಷಿಗಳ ಹಾಗೂ ಪಕ್ಷದ ಪ್ರಮುಖರ ಒತ್ತಾಯದ ಮೇರೆಗೆ ಇಂದು ನನ್ನ ಹುಟ್ಟುಹಬ್ಬದ ಆಚರಣೆ ಮಾಡಲಾಗುತ್ತಿದೆ. ಸಂತೋಷವಿಷಯವೇನೆಂದರೆ ಬಡಜನರ ಸೇವೆ ಮೂಲಕ ಆಚರಿಸುತ್ತಿರುವುದು. ಇಂದು ಮುಂಜಾನೆ ನಮ್ಮ ಪಕ್ಷದ ಹಿರಿಯರು ನಮ್ಮೆಲ್ಲರ ಮಾರ್ಗದರ್ಶಕರು ಆದ ದಿ. ವೆಂಕಟರೆಡ್ಡಿ ಅವರ ಸಮಾಧಿ ಬಳಿ ತೆರಳಿ ಪೂಜೆ ಸಲ್ಲಿಸಿ ನಂತರ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಆಹಾರ ಹಣ್ಣು ಹಂಪಲು ವಿತರಣೆ ಮಾಡಿದ್ದೇವೆ ಮಧ್ಯಾಹ್ನ ನಗರದ ತೇರಿನ ಬೀದಿಯಲ್ಲಿ ಅನ್ನದಾಸೋಹ ಏರ್ಪಡಿಸಿದ್ದು ವಿವಿಧ ಸಮಾಜ ಸೇವಾ ಕಾರ್ಯಗಳನ್ನು ಮಾಡುವ ಮೂಲಕ ಅರ್ಥಪೂರ್ಣ ಆಚರಣೆ ಮಾಡುತ್ತಿರುವುದು ಮನಸ್ಸಿಗೆ ನೆಮ್ಮದಿ ಭಾವ ಮೂಡಿಸಿದೆ ಎಂದರು.
ಈ ವೇಳೆ ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವ್ ನಾಯಕ್, ರಾಜ್ಯ ಕಾರ್ಯದರ್ಶಿ ಡಿ ಪಿ ಆಂಜನೇಯ, ತಾಲ್ಲೂಕು ಅಧ್ಯಕ್ಷ ವೆಂಕಟೇಶ್ , ಮುಖಂಡರಾದ ನರಸಿಂಹಮೂರ್ತಿ,ಆರ್ ರಂಗನಾಥ್, ಡಿ ವೆಂಕಟೇಶ್,ಎಂ ಜಿ ಬೋರೇಗೌಡ,ವಿ ಪರಮೇಶ್,ಜಿ ಸುರೇಶ್,ಕೆ ಎನ್ ಕುಮಾರ್,ನರಸಿಂಹಮೂರ್ತಿ,ಮಂಜುನಾಥ್,ಶ್ರೀನಿವಾಸ್,ರಾಜಣ್ಣ,ರಾಮಚಂದ್ರ,ಮಹೇಶ್,ಬಾಬಾ ನಾಗರಾಜು,ಜೀವನ್ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಕನ್ನಡ ಪಕ್ಷದ ಪದಾಧಿಕಾರಿಗಳು ಹಾಜರಿದ್ದರು.




