ಮೈಸೂರಿನ ಡಾ॥ ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯದ ಮೂಲಕ ದೇವನಹಳ್ಳಿ ಟೌನ್/ತಾಲ್ಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸವಿತಾ ಸಮಾಜದ ಪಾರಂಪರಿಕ ಕಲೆಗಳಾದ ಡೋಲು ಮತ್ತು ನಾದಸ್ವರ ಸಂಗೀತ ತರಬೇತಿ ಕೇಂದ್ರಕ್ಕೆ ದಾಖಲಾತಿ ಪಡೆಯಲು ಆಫ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಪ್ರವೇಶ ಪಡೆಯಲು ಹಿಂದುಳಿದ ವರ್ಗಗಳ ಪ್ರವರ್ಗ-2(ಎ)ರಲ್ಲಿ ಬರುವ ಸವಿತಾ ಸಮಾಜ ಹಾಗೂ ಅದರ ಉಪಜಾತಿಗಳ ವಿದ್ಯಾರ್ಥಿಗಳು ಅರ್ಹರಾಗಿದ್ದು, ಮೇ 30 ಕ್ಕೆ ಅರ್ಜಿ ಸಲ್ಲಿಸಲು ಕೊನೆದಿನವಾಗಿದೆ
ಕನಿಷ್ಠ ವಯೋಮಿತಿ 10 ವರ್ಷ ಹಾಗೂ ಗರಿಷ್ಠ ವಯೋಮಿತಿ 15 ವರ್ಷ (ಒಂದು ವೇಳೆ, ಅಧ್ಯಯನ ಮಾಡುತ್ತಿರುವ 15 ವರ್ಷ ವಯೋಮಿತಿಯೊಳಗಿನ ವಿದ್ಯಾರ್ಥಿಗಳು ದೊರೆಯದ ಪಕ್ಷದಲ್ಲಿ ಮಾತ್ರ 18 ವರ್ಷದವರೆಗಿನ ಮಕ್ಕಳನ್ನು ಸ್ವಲ್ಪಮಟ್ಟಿಗೆ ಸೇರಿಸಲು ಅವಕಾಶ ನೀಡಲಾಗುವುದು). ಕುಟುಂಬದ ವಾರ್ಷಿಕ ಆದಾಯ ಮಿತಿ ರೂ. 2.00 ಲಕ್ಷ ರೂಗಳು ಆಗಿರಬೇಕು.
ಅರ್ಜಿ ಪಡೆಯಲು ಹಾಗೂ ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿ, ಮಿನಿ ವಿಧಾನ ಸೌಧದ ಹಿಂಭಾಗ, ಡಿವಿಎಂ ಕಾಲೋನಿ, ದೇವನಹಳ್ಳಿ ಟೌನ್ / ತಾಲ್ಲೂಕು, ದೂ. ಸಂಖ್ಯೆ 080-22449999 ಗೆ ಸಂಪರ್ಕಿಸಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
